ಬೆಳಗಾವಿ ಬ್ರೇಕಿಂಗ್:
ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಬಳಿ 14 ಕೋಟಿ ಅಕ್ರಮ ಆಸ್ತಿ ಪತ್ತೆ

ದಾಳಿ ವೇಳೆ 6 ಕೆಜಿ ಚಿನ್ನ, 5ಕೆಜಿ ಬೆಳ್ಳಿ, 3.12 ಕೋಟಿ ಡೆಪಾಸಿಟ್, ಐಷಾರಾಮಿ ಕಾರು, ಬೈಕ್ ಗಳು ಜಪ್ತಿ.
ಎರಡು ದಿನಗಳ ಲೋಕಾಯುಕ್ತ ದಾಳಿ ಮುಕ್ತಾಯ ಬೆನ್ನೆಲ್ಲೇ ಕೋಟಿ ಕೋಟಿ ಅಕ್ರಮ ಆಸ್ತಿ ಬೆಳಕಿಗೆ.
ಬೆಳಗಾವಿಯ ಏಳು ಕಡೆ ನಡೆದ ದಾಳಿಯಲ್ಲಿ ಒಟ್ಟು 14ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆ.
ಬೆಳಗಾವಿ ನಗರದ ಆಂಜನೇಯ ನಗರ ಸೇರಿದಂತೆ ಏಳು ಕಡೆ ಏಕಕಾಲದಲ್ಲಿ ದಾಳಿ.

DUDC ಎಇಇ ಅಜಯಸಿಂಗ್ ರಜಪೂತ ಮನೆ, ಕಚೇರಿ ಮೇಲೆ ದಾಳಿ.
ಬೆಳಗಾವಿಯಲ್ಲಿ ಮೂರು ಮನೆ, ಕಚೇರಿ, ಬ್ಯಾಂಕ್ ಲಾಕರ್ ಪರಿಶೀಲನೆ.
ಈ ವೇಳೆ ಸವದತ್ತಿ, ಹುಕ್ಕೇರಿ, ಹುಬ್ಬಳ್ಳಿಯಲ್ಲಿ 18 ನಿವೇಶನ ಪತ್ತೆ.
6 ಕೆಜಿ ಚಿನ್ನ, 5ಕೆಜಿ ಬೆಳ್ಳಿ, 3.12ಕೋಟಿ ಡೆಪಾಸಿಟ್, ಐಷಾರಾಮಿ ಕಾರು, ಬೈಕ್ ಗಳು ಜಪ್ತಿ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಹಿನ್ನೆಲೆ ಮುಂದುವರೆದ ತನಿಖೆ.



