“ಬೆಚ್ಚಿ ಬೀಳಿಸುತ್ತಿದೆ ಉಪ್ಪಿಯ ಕಲಿ ಅವತಾರ “. ಪ್ರಪಂಚದ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಉಪೇಂದ್ರ, ಕೇವಲ ನಿರ್ದೇಶಕ ಮಾತ್ರವಲ್ಲ ನಟನಾಗಿಯೂ ಕೂಡ ಸೂಪರ್ ಸ್ಟಾರ್ ಎನಿಸಿಕೊಂಡವರು.
ಆಗಿನ ಕಾಲಕ್ಕೆ ಮೂಡಿ ಬರುತ್ತಿದ್ದ ಚಿತ್ರಗಳ ಟ್ರೆಂಡನ್ನು ಬದಲಾಯಿಸಿದ ನಿರ್ದೇಶಿಕ ಉಪೇಂದ್ರ. ತಮ್ಮ ಮೊದಲ ಚಿತ್ರವಾದ ತರ್ಲೆ ನನ್ಮಗ ಚಿತ್ರದಿಂದ ನಿರ್ದೇಶನದ ಕ್ಯಾಪ್ಟನ್ ಉಪೇಂದ್ರ, ಜಗ್ಗೇಶ್ ಅವರನ್ನ ನಾಯಕನನ್ನಾಗಿ ಮಾಡಿದರು.
ನಂತರ ಓಂ ಸಿನಿಮಾ ವನ್ನ ನಿರ್ದೇಶನ ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದರು.
ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದಂತಹ ದಾಖಲೆಯನ್ನು ನಿರ್ಮಿಸಿದ ಉಪೇಂದ್ರ ಮೊದಲ ಬಾರಿಗೆ ನಾಯಕನಾಗಿ ಏ ಚಿತ್ರದಲ್ಲಿ ನಟಿಸಿದರು.
ಪ್ರಪಂಚದ ಎಂಟನೇ ಅತಿ ದೊಡ್ಡ ನಿರ್ದೇಶಕ
ಅಲ್ಲಿಂದ ಮುಂದೆ ನಿರ್ದೇಶನ ಹಾಗೂ ನಟನೆಯಲ್ಲಿ ತಮ್ಮದೇ ಆದ ಚಾಪನ್ನ ಮೂಡಿಸುತ್ತಾ ಇಂದು ಪ್ರಪಂಚದ ಎಂಟನೇ ಅತಿ ದೊಡ್ಡ ನಿರ್ದೇಶಕರಾಗಿ ಬೆಳೆದು ನಿಂತಿದ್ದಾರೆ.
ಯು ಐ ಚಿತ್ರದ ಟೀಸರ್ ಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://youtu.be/8lwSsRWmRyY?si=FNTnTwk-F55v8SRH
ಕೆಲವು ವರ್ಷಗಳಿಂದ ನಿರ್ದೇಶನಕ್ಕೆ ಬ್ರೇಕ್ ಕೊಟ್ಟು ನಟರಾಗಿ ಮತ್ತು ಪ್ರಜಾಕೀಯದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಸುದೀರ್ಘ ವಿರಾಮದ ನಂತರ ಇದೀಗ ಉಪ್ಪಿ ನಿರ್ದೇಶನ ಹಾಗೂ ನಟನೆಯ ಅಖಾಡಕ್ಕೆ ಇಳಿದಿದ್ದಾರೆ.
ಲೇಟಾಗಿ ಬಂದ್ರು ಲೇಟೆಸ್ಟ್ ಆಗಿ ಬಂದ್ರು ಅಂತ ಫ್ಯಾನ್ಸ್ ಹೇಳ್ತಿದ್ದಾರೆ
ಬಹು ದಿನಗಳ ನಂತರ ಉಪೇಂದ್ರ ನಟನೆ ಮತ್ತು ನಿರ್ಮಿಸಿದ ಕ್ಕೆ ಕೈ ಹಾಕಿದ್ದಾರೆ ಹೌದು ಯುಐ ಸಿನಿಮಾದ ಮೂಲಕ ತಮ್ಮ ನಿರ್ದೇಶನ ಹಾಗೂ ನಟನೆಯನ್ನು ಮುಂದುವರಿಸಿದ್ದಾರೆ.
ಲಹರಿ ವೇಲು ಹಾಗೂ ಕೆಪಿ ಶ್ರೀಕಾಂತ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾವನ್ನು, ನಟ ಕಮ್ ನಿರ್ದೇಶಕ ಉಪೇಂದ್ರ ನಿರ್ದೇಶನ ಮಾಡ್ತಾ ಇದ್ದಾರೆ.
ಇನ್ನು ಸಿಂಹ ವಿಷಕ್ಕೆ ಬರೋದಾದ್ರೆ ಈ ಸಿನಿಮಾದ ಅಪ್ಡೇಟ್ಗಳು ತುಂಬಾನೇ ಕಮ್ಮಿ ಇದ್ದವು ಆದರು ಕೂಡ, ಸಿನಿಮಾದಿಂದ ಹೊರ ಬಿದ್ದಿರುವ ಪೋಸ್ಟರ್ ಅಥವಾ ಟೀಸರ್ ಯಾವುದಾದರೂ ಕೂಡ ಸಕ್ಕತ್ ಹಲ್ ಚಲ್ ಎಬ್ಬಿಸಿದೆ.
ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೋಲ್ ಆಗುತ್ತೆ ಹಾಡು, ದೊಡ್ಡ ಮಟ್ಟದಲ್ಲಿ ಟ್ರೆಂಡ್ ಸೃಷ್ಟಿ ಮಾಡಿತ್ತು.
ಕಲಿಯ ಅವತಾರದಲ್ಲಿ ಬಂದ್ರ ಉಪೇಂದ್ರ
ಆದರೆ ಇದೆಲ್ಲವನ್ನ ಮೀರಿ ಇತ್ತೀಚಿಗೆ ಬಿಡುಗಡೆಯಾಗಿರುವ, ಸಿನಿಮಾದ ಟೀಸರ್ ನೋಡಿದ್ರೆ ಒಂದು ಕ್ಷಣ ಭಯವಾಗುತ್ತೆ. ನರಕದಂತಿರುವ ಜಾಗದಲ್ಲಿ ಸಾವಿರಾರು ಹೆಣಗಳ ಬುರುಡೆಯ ರಾಶಿ, ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಆಕಾಶದಲ್ಲಿನ ಗ್ರಹಗಳು, ಕಾಗೆ, ಹಾದುಹೋಗುತ್ತಿರುವ ರೈಲು, ಬುಸುಗುಡುತ್ತಿರುವ ಹಾವು. ಇದೆಲ್ಲದರ ನಡುವೆ ಖಡ್ಗದಾರಿಯಾಗಿ ಏಕಾಂಗಿಯಾಗಿ ಕುಳಿತಿರುವ ವ್ಯಕ್ತಿ ಉಪೇಂದ್ರ. ವಿಭಿನ್ನ ಗೆಟಪ್ ನಲ್ಲಿ ಸ್ಮಶಾನ ಮೌನದಲ್ಲಿ ಕುಳಿತಿರುವ ಉಪೇಂದ್ರರವರನ್ನ ಕಂಡು ಅಭಿಮಾನಿಗಳು ಇದು ಕಲಿಯ ಅವತಾರ ಅಂತ ಹೇಳ್ತಿದ್ದಾರೆ.
ದರ್ಶನ್ ಬಗ್ಗೆ ಕೇಳ್ತಿದಂತೆ ವಿಜಯ್ ಏನಂದ್ರು ನೋಡಿ https://swarasyanews.com/?p=103
ಉಪೇಂದ್ರ ಅಂದ್ರೆ ಹಾಗೆ ತಾವು ಮಾಡೋ ಪ್ರತಿಯೊಂದು ಕೆಲಸ ಕೂಡ ತುಂಬಾನೇ ವಿಭಿನ್ನವಾಗಿರುತ್ತೆ ಆದ್ದರಿಂದಲೇ ಉಪೇಂದ್ರ ಅವರನ್ನು, ಡಿಫ್ರೆಂಟ್ ಡೈರೆಕ್ಟರ್ ಅಂತಾನೆ ಕರೀತಾರೆ.
ಇನ್ನೂ ಅದೇ ಟೀಸರ್ ನಲ್ಲಿ ಯುಐ ಸಿನಿಮಾ ಅಕ್ಟೋಬರ್ ತಿಂಗಳಿನಲ್ಲಿ ತೆರೆಗೆ ಬರಲಿದೆ ಅಂತ ತಿಳಿಸಿದ್ದಾರೆ. ಒಟ್ಟಿನಲ್ಲಿ ಸಿನಿಮಾದ ಟೀಸರ್ ನೋಡಿ ದೇಶದಾದ್ಯಂತ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ತುಂಬಾ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.
ಯಾರು ಕೂಡ ಊಹೆ ಮಾಡಿದ ರೀತಿಯಲ್ಲಿ ಸಿನಿಮಾವನ್ನ ತರುವಂತಹ ನಿರ್ದಿಷ್ಟಕ ಉಪೇಂದ್ರ ಯು ಎಸ್ ಸಿನಿಮಾ ವನ್ನ ಹೇಗೆ ನಿರ್ದೇಶನ ಮಾಡಿದ್ದಾರೆ ಮತ್ತು ನಮ್ಮನ್ನೆಲ್ಲ ಯಾವ ಪ್ರಪಂಚಕ್ಕೆ ಕರೆದುಕೊಂಡು ಹೋಗ್ತಾರೆ ಅಂತ ಸಿನಿಮಾ ಬಿಡುಗಡೆಯಾದ ನಂತರವಷ್ಟೇ ನೋಡಬೇಕು.