ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿ ಈಗಾಗಲೇ 30 ದಿನಗಳು ಕಳೆದಿವೆ. ಪ್ರತಿದಿನ ಹೊರಗೆ ಬರುವ ದಾರಿಯನ್ನ ದರ್ಶನ್ ಯೋಚನೆ ಮಾಡುತ್ತಿದ್ದಾರೆ.ಆದರೆ ದರ್ಶನ್ ಮಾಡಿದ್ದು ಸರೀನಾ ತಪ್ಪಾ ಅನ್ನೋ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ.
ಈ ನಡುವೆ ಸಂದರ್ಶನ ಒಂದರಲ್ಲಿ ಮಾತನಾಡಿದ ಪ್ರಶಾಂತ ಸಂಬರ್ಗಿ ದರ್ಶನ್ ಅಭಿಮಾನಿಗಳು ಬಾಡಿಗೆ ಅಭಿಮಾನಿಗಳು ಅಂತ ಹೇಳಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದಾರೆ.
ಇದನ್ನೂ ನೋಡಿ :
ಕೇರಳದ ಸಂತ್ರಸ್ತರಿಗೆ ಅಲ್ಲು ಅರ್ಜುನ್ ಆರ್ಥಿಕ ನೆರವು
ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಬಹುಪಾಲು ಜನ ದರ್ಶನ್ ನಟನೆಗೆ ಅಥವಾ ದರ್ಶನ್ ಸಿನಿಮಾ ನೋಡಿ ಅಭಿಮಾನಿಗಳಾದವರಲ್ಲ.
ಅವರೆಲ್ಲ ಬಾಡಿಗೆ ಅಭಿಮಾನಿಗಳು ಅಂತ ದರ್ಶನ್ ಅಭಿಮಾನಿಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ.
ಇನ್ನು ದಾಸ ದರ್ಶನ್ ಜೈಲಿನಲ್ಲಿ ಊಟ ಸೇರದ ಕಾರಣ ದೇಹದ ತೂಕ ಕಡಿಮೆಯಾಗಿದೆ ನನಗೆ ಮನೆಯ ಊಟವನ್ನು ವ್ಯವಸ್ಥೆ ಮಾಡಿಕೊಡಿ ಎಂದು ಕೋರ್ಟ್ನಲ್ಲಿ ಕೇಳಿದ್ದಾರೆ.
ಇನ್ನೂ ದರ್ಶನ್ ಮುಂಬರುವ ಚಿತ್ರವಾದ ಡೆವಿಲ್ ನಲ್ಲಿ ಅಭಿನಯಿಸ್ತಾ ಇರೋದು,ಎಲ್ರಿಗೂ ಗೊತ್ತೇ ಇದೆ .
ಹಾಗೂ ಜೋಗಿ ಪ್ರೇಮ್ ಆಕ್ಷನ್ ಕಟ್ ನಲ್ಲಿ ಮೂಡಿ ಬರುತ್ತಿರುವ, ಮತ್ತೊಂದು ಚಿತ್ರಕ್ಕೆ ದರ್ಶನ್ ಸಹಿ ಹಾಕಿದ್ದಾರೆ.
ಆದರೆ ದರ್ಶನ್ ಜೈಲಿನಲ್ಲಿ ಇರುವ ಕಾರಣ, ಚಿತ್ರದ ನಿರ್ಮಾಪಕರುಗಳು ದಿಕ್ಕು ಕಾಣದೆ ಕಂಗಾಲಾಗಿದ್ದಾರೆ.
ಇನ್ನೂ ದರ್ಶನ್ ಪರವಾಗಿ ಅಭಿಮಾನಿಗಳು, ದರ್ಶನ್ ಕೈದಿ ನಂಬರನ್ನು ಮೈಮೇಲೆ ಹಚ್ಚೆ, ಹಾಗೂ ಟೀ ಶರ್ಟ್ ಗಳ ಮೇಲೆ ಪ್ರಿಂಟ್ ಮಾಡಿಸಿಕೊಂಡು ಓಡಾಡುತ್ತಿದ್ದಾರೆ.
ಇದರಿಂದ ಸಾಮಾನ್ಯ ಜನರು, ದರ್ಶನ್ ಅಭಿಮಾನಿಗಳ ಹುಚ್ಛಾಟವನ್ನ ಕಂಡು, ಹಣೆ ಹಣೆ ಚಚ್ಚಿಕೊಳ್ತಿದ್ದಾರೆ. ಇದೇನೇ ಇದ್ರೂ ದರ್ಶನ್, ಜೈಲಿನಿಂದ ಬಿಡುಗಡೆಯಾಗೋದು ಸದ್ಯಕ್ಕೆ ಕಷ್ಟದ ಮಾತಾಗಿದೆ.
ಪತ್ನಿ ವಿಜಯಲಕ್ಷ್ಮಿ ದೇವರ ಮೊರೆ ಹೋಗಿದ್ದಾರೆ.
ಇನ್ನು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ದೇವರ ಮೊರೆ ಹೋಗಿದ್ದಾರೆ. ತನ್ನ ಪತಿ ಆದಷ್ಟು ಬೇಗ ಬಿಡುಗಡೆ ಆಗಲಿ, ಅಂತ ಎಲ್ಲಾ ದೇವರ ಬಳಿ ಹರಕೆಯನ್ನು ಕಟ್ಟಿಕೊಂಡಿದ್ದಾರೆ.
ಇದಕ್ಕೂ ಮೊದಲು ದರ್ಶನ್, ವರ್ಷಗಳ ಹಿಂದೆ ಪತ್ನಿಯ ಮೇಲೆ ಹಲ್ಲೆ ನಡೆಸಿ, ಜೈಲು ಸೇರಿದ್ದರು.
ನಂತರ ಪತ್ನಿ ವಿಜಯಲಕ್ಷ್ಮಿ, ದೂರನ್ನ ಹಿಂಪಡೆದ ನಂತರ ದರ್ಶನ್ ಗೆ ಬಿಡುಗಡೆಯ ಭಾಗ್ಯ ಸಿಕ್ಕಿತ್ತು.
ಅಷ್ಟರಲ್ಲಾಗಲೇ ಸಾರಥಿ ಚಿತ್ರ ಬಿಡುಗಡೆ ಕಂಡು ಭರ್ಜರಿ ಯಶಸ್ಸಿನತ್ತ ಮುನ್ನುಗುತ್ತಿತ್ತು.
ದರ್ಶನ್ ಬಿಡುಗಡೆಯಾದ ತಕ್ಷಣ, ದರ್ಶನ್ ಅವರನ್ನ ಅಭಿಮಾನಿಗಳು, ಥಿಯೇಟರ್ ಹತ್ತಿರ ಕರೆದುಕೊಂಡು ಹೋಗಿದ್ದರು.
ಸಾರಥಿ ಚಿತ್ರ ಶತದಿನೋತ್ಸವ ಪೂರೈಸುವುದರ ಜೊತೆಗೆ, ದರ್ಶನ್ ಗೆ ಅಭಿಮಾನಿಗಳ ಬಲವು ಜಾಸ್ತಿಯಾಗಿತ್ತು.
ಅಲ್ಲಿಂದ ಹಿಂತಿರುಗಿ ನೋಡದ ದರ್ಶನ್, ಸ್ಯಾಂಡಲ್ ವುಡ್ ನ ದೈತ್ಯ ಮರವಾಗಿ ಬೆಳೆದುಬಿಟ್ಟಿದ್ದರು. ಅಣ್ಣಾವ್ರ ನಂತರ ಅತಿ ಹೆಚ್ಚು, ಅಭಿಮಾನಿಗಳನ್ನ ಹೊಂದಿದ ನಟ ಎಂಬ, ಹೆಗ್ಗಳಿಕೆಗೆ ದರ್ಶನ್ ಪಾತ್ರರಾಗಿದ್ದರು.
ದರ್ಶನ್ ಹೋದಲ್ಲಿ ಬಂದಲ್ಲಿ ಜನರ ಹರ್ಷೋದ್ಗಾರ
ದರ್ಶನ್ ಹೋದಲ್ಲಿ ಬಂದಲ್ಲಿ ಜನರ ಹರ್ಷೋದ್ಗಾರ , ಮುಗಿಲು ಮುಟ್ಟುತ್ತಿತ್ತು. ಆದರೆ ವಿಧಿಯ ಆಟ ಬೇರೆ ಆಗಿತ್ತು. ದರ್ಶನ್ ಮೇಲೆ ಒಂದಾದರ ಮೇಲೆ ಒಂದರಂತೆ, ಕಾಂಟ್ರವರ್ಸಿಗಳು ಆಗೋಕೆ ಶುರುವಾಗಿತ್ತು.
ಮಾಧ್ಯಮಗಳ ಬಗ್ಗೆ ದರ್ಶನ್ ಕೆಟ್ಟದಾಗಿ ಮಾತನಾಡಿದ್ದರು, ಎಂಬ ಕಾರಣಕ್ಕೆ ಮಾಧ್ಯಮಗಳು ದರ್ಶನ್ ಅವರನ್ನ ದೂರ ಇಟ್ಟಿದ್ದವು. ಇದರಿಂದ ಕ್ರಾಂತಿ ಚಿತ್ರಕ್ಕೆ ಮಾಧ್ಯಮಗಳ, ಯಾವುದೇ ಬೆಂಬಲ ಇಲ್ಲದಂತಾಯಿತು.
ಕಾಟೇರ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ದರ್ಶನ್ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದರು. ಹೀಗೆ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ, ದರ್ಶನ್ ಮೇಲೆ ಕೊಲೆ ಆರೋಪ ಬಂದು ದರ್ಶನ್, ಜೈಲು ಸೇರುವಂತೆ ಆಯಿತು.
Jai D Boss
Thank you