ಕೆಜಿಎಫ್ ಕಾಂತಾರಾ ಚಿತ್ರಕ್ಕೆ ನಾಲ್ಕು ನ್ಯಾಷನಲ್ ಅವಾರ್ಡ್, ಇತ್ತೀಚಿನ ದಶಕಗಳಲ್ಲಿ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದ ಚಿತ್ರಗಳ ಸಾಲಿನಲ್ಲಿ ಕಾಂತಾರ ಹಾಗೂ ಕೆಜಿಎಫ್ ಚಾಪ್ಟರ್ 1 ಚಾಪ್ಟರ್ 2 ಚಿತ್ರಗಳು ಮೊದಲ ಸಾಲಿನಲ್ಲಿವೆ
ಕನ್ನಡ ಚಿತ್ರಗಳನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ನೋಡುವಂತೆ ಮಾಡಿದ ಹೆಗ್ಗಳಿಕೆ ಕಾಂತರಾ ಹಾಗೂ ಕೆಜಿಎಫ್ ಚಿತ್ರದ್ದು, ಈ ಎರಡು ಚಿತ್ರಗಳು ಬಾಕ್ಸ್ ಆಫೀಸ್ ಕಲೆಕ್ಷನ್ ಧೂಳಿಪಟ ಮಾಡಿದ್ದವು.
ಫ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಯಶ್ ಹಾಗೂ ರಿಷಬ್ ಶೆಟ್ಟಿ ಬಹಳ ಸದ್ದು ಮಾಡಿದ್ದರು. ಕನ್ನಡ ಚಿತ್ರಗಳು ಕೂಡ ಸಾವಿರಾರು ಕೋಟಿ ಗಳಿಸಬಲ್ಲವೂ ಎಂಬುದಕ್ಕೆ ಈ ಸಿನಿಮಾಗಳೇ ಸಾಕ್ಷಿ.
ನಾಲ್ಕು ರಾಷ್ಟ್ರಪ್ರಶಸ್ತಿ ಪಡೆದ ಕನ್ನಡ ಚಿತ್ರಗಳು.
ಇದನ್ನು ಓದಿ : ರಕ್ಷಿತ್ ಶೆಟ್ಟಿ ನನ್ನ ಸ್ನೇಹಿತನಲ್ಲ https://swarasyanews.com/?p=75
ಈಗ ಈ ಎರಡು ಚಿತ್ರಗಳು ಹೊಸ ದಾಖಲೆಯನ್ನು ಬರೆದಿವೆ. 70ನೇ ರಾಷ್ಟ್ರಪ್ರಶಸ್ತಿಯನ್ನು ಎರಡು ಚಿತ್ರಗಳು ತಮ್ಮದಾಗಿಸಿಕೊಂಡಿವೆ.
ಹೌದು ಕೆಜಿಎಫ್ ಹಾಗೂ ಕಾಂತರಾ ಚಿತ್ರಗಳಿಗೆ ನ್ಯಾಷನಲ್ ಅವಾರ್ಡ್ ದೊರಕಿದೆ.
ಕನ್ನಡದ ಹೆಮ್ಮೆಯ ಚಿತ್ರಗಳಾದ ಕೆಜಿಎಫ್ ಚಾಪ್ಟರ್ 1 ಚಾಪ್ಟರ್ 2 ಹಾಗೂ ಕಾಂತರಾ ಚಿತ್ರಗಳಿಗೆ ಇದೀಗ ರಾಷ್ಟ್ರಪ್ರಶಸ್ತಿಯ ಗರಿಮೆ ಒಲಿದು ಬಂದಿದೆ.
ಕೆಜಿಎಫ್ ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿ ಹಾಗೂ ಕಾಂತರಾ ಚಿತ್ರಕ್ಕೆ 2 ರಾಷ್ಟ್ರ ಪ್ರಶಸ್ತಿ ದೊರಕಿದೆ.
ಅತ್ಯುತ್ತಮ ಚಿತ್ರಗಳ ಪೈಕಿಯಲ್ಲಿ ರಾಷ್ಟ್ರ ಪ್ರಶಸ್ತಿ
ಕೆಜಿಎಫ್ ಕಾಂತಾರಾ ಚಿತ್ರಕ್ಕೆ ನಾಲ್ಕು ನ್ಯಾಷನಲ್ ಅವಾರ್ಡ್
ಅತ್ಯುತ್ತಮ ಪ್ರಾದೇಶಿಕ ಸಿನಿಮಾದ ವಿಭಾಗದಲ್ಲಿ ಕೆಜಿಎಫ್ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿದೆ ಹಾಗೂ ಅತ್ಯುತ್ತಮ ಸಾಹಸನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಕೆ.ಜಿ.ಎಫ್. ಸಿನಿಮಾಗಾಗಿ ದೊರಕಿದೆ.
ಇನ್ನು ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತರಾ ಸಿನಿಮಾದ ರಿಷಬ್ ಶೆಟ್ಟಿ ನಟನೆಗೆ ರಾಷ್ಟ್ರಪ್ರಶಸ್ತಿ ದೊರಕಿದೆ. ಹಾಗೂ ಅತ್ಯುತ್ತಮ ಮನರಂಜನ ಚಿತ್ರಕ್ಕಾಗಿ ಕಾಂತರಾ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿದೆ.
ಕನ್ನಡದ ಜನತೆಗೆ ನನ್ನ ಧನ್ಯವಾದಗಳು
ಇದಕ್ಕೆ ಪ್ರತಿಕ್ರಿಸಿದ ರಿಷಬ್ ಶೆಟ್ಟಿ, ನನ್ನ ಚಿತ್ರತಂಡ ನಿರ್ಮಾಪಕರು ಹಾಗೂ ಕನ್ನಡದ ಜನತೆಗೆ ನಾನು ಧನ್ಯವಾದವನ್ನ ಅರ್ಪಿಸುತ್ತೇನೆ. ಯಾವುದೇ ಸಿನಿಮವಾದರೂ ಕೂಡ ನಾವು ನಿರೀಕ್ಷೆಯನ್ನು ಇಟ್ಕೊಂಡು ಮಾಡೋದಿಲ್ಲ. ಸಿನಿಮಾ ಜನರಿಗೆ ತಲುಪಬೇಕು ಅನ್ನೋದು ಮಾತ್ರ ನಮ್ಮ ಉದ್ದೇಶ.
ಹಾಗಾಗಿ ನಾವು ನಮ್ಮ ಪ್ರಾಮಾಣಿಕವಾದ ಕೆಲಸವನ್ನ ಮಾಡ್ತೀವಿ. ಇದರ ಎಲ್ಲಾ ಕ್ರೆಡಿಟ್ ನನ್ನ ಚಿತ್ರ ತಂಡಕ್ಕೆ ಸಲ್ಲಿಸಬೇಕು.
ಮೊದಲ ಬಾರಿಗೆ ನನ್ನ ನಿರ್ದೇಶನದಲ್ಲಿ ನಾನೇ ನಟನಾಗಿ ನಟಿಸಿದ್ದು ಖುಷಿ ಕೊಟ್ಟಿದೆ ಹಾಗೂ ಅತ್ಯುತ್ತಮ ನಿರ್ದೇಶನ ಮತ್ತು ಅತ್ಯುತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿ ಬಂದಿರೋದು ತುಂಬಾ ಸಂತೋಷವನ್ನು ಉಂಟು ಮಾಡಿದೆ.
ಕನ್ನಡಕ್ಕೆ ನಾಲ್ಕು ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ
ಇನ್ನು ಅತ್ಯುತ್ತಮ ನಟ ವಿಭಾಗದಲ್ಲಿ ಕನ್ನಡಕ್ಕೆ ಈಗಾಗಲೇ ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಬಂದಿತ್ತು ಇದೀಗ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿರೋದು ಐದನೆಯ ಪ್ರಶಸ್ತಿಯಾಗಿದೆ.
https://youtu.be/Hcdn5yQU9M8?si=uaCIydCr_LKjCuRj
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬೆಟ್ಟದ ಹೂವು ಸಿನಿಮಾದ ನಟನೆಗಾಗಿ ಪುನೀತ್ ರಾಜಕುಮಾರ್ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು.
ಮತ್ತು ನಾನು ಅವನಲ್ಲ ಅವಳು ಚಿತ್ರದ ನಟನೆಗಾಗಿ ನಟ ಸಂಚಾರಿ ವಿಜಯ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ದೊರಕಿತು.
ಹಾಗೂ ಚೋಮನ ದುಡಿ ತಬರನ ಕಥೆ ಸಿನಿಮಾದ ನಟನೆಗಾಗಿ ಆಯಾ ನಟರುಗಳಿಗೆ ರಾಷ್ಟ್ರಪ್ರಶಸ್ತಿ ದೊರಕಿತು. ಇದೀಗ ಕನ್ನಡದ ಐದನೇ ರಾಷ್ಟ್ರ ಪ್ರಶಸ್ತಿ ರಿಷಬ್ ಶೆಟ್ಟಿ ಪಾಲಾಗಿದೆ.
ಹೊಂಬಾಳೆ ಪ್ರೊಡಕ್ಷನ್ ಗೆ ನಾಲ್ಕು ರಾಷ್ಟ್ರ ಪ್ರಶಸ್ತಿ ಗರಿ
ಕೆಜಿಎಫ್ ಚಿತ್ರಕ್ಕೆ ಎರಡು ರಾಷ್ಟ್ರಪ್ರಶಸ್ತಿ ಹಾಗೂ ಕಾಂತಾ ರ ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿ ದೊರಕಿರುವುದರಿಂದ ಹೊಂಬಾಳೆ ಸಿನಿಮಾ ಬ್ಯಾನರ್ಗೆ ಒಟ್ಟು ನಾಲ್ಕು ರಾಷ್ಟ್ರ ಪ್ರಶಸ್ತಿ ದೊರೆತಂತಾಗಿದೆ.
ನಿಮಗೆ ಮಾತನಾಡಿರುವ ನಿರ್ಮಾಪಕ ವಿಜಯ್ ಕೆರಗಂದೂರು, ಕನ್ನಡ ಪ್ರೇಕ್ಷಕರ ಪ್ರೋತ್ಸಾಹದಿಂದ ನಾವು ಇಂದು ಈ ಮಟ್ಟಿಗೆ ಬೆಳೆದಿದ್ದೇವೆ.
ಕನ್ನಡದ ಜನತೆಗೆ ನಾನು ಇಲ್ಲಿಂದಲೇ ಧನ್ಯವಾದಗಳು ಅರ್ಪಿಸುತ್ತೇನೆ. ಕರೋನಾ ಬಳಿಕ ರಿಲೀಸ್ ಆದ ಕೆಜಿಎಫ್ ಚಿತ್ರಕ್ಕೆ ಅಭೂತಪೂರ್ವ ಯಶಸ್ಸು ದೊರಕಿಸಿ ಕೊಡುವಲ್ಲಿ ಕನ್ನಡಿಗರ ಪಾತ್ರ ತುಂಬಾ ದೊಡ್ಡದು.
Lಎರಡು ಚಿತ್ರಗಳ ತಂಡಗಳಿಗೆ ನಾನು ಧನ್ಯವಾದವನ್ನ ಅರ್ಪಿಸುತ್ತೇನೆ ಅಂತ ವಿಜಯ ಕಿರಂಗದೂರು ಹೇಳಿದ್ದಾರೆ .
Kantara Kgf always evergreen movies