ಇಷ್ಟರಲ್ಲೇ ನಾನು ಮದುವೆ ಆಗ್ತೀನಿ- ಡಾಲಿ ಧನಂಜಯ್ : ಜಿಂಗೋ ಚಿತ್ರದ ಟೀಸರ್ ಲಾಂಚ್ ಇವೆಂಟ್ ನಲ್ಲಿ ಭಾಗವಹಿಸಿದ್ದ ಡಾಲಿದ್ದೇನೆ ಅವರಿಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಧನಂಜಯ್ ಖಡಕ್ಕಾಗಿ ಉತ್ತರಿಸಿದ್ದಾರೆ. ಸಿನಿಮಾಗೆ ಜನ ಬರ್ತಿಲ್ಲ ಇಂಡಸ್ಟ್ರಿ ಮುಳುಗೋಯ್ತು ಅಂತ ಕೇಳಿದ ಪ್ರಶ್ನೆಗೆ
ನಾವು ಸಿನಿಮಾದವರಾಗಿದ್ದುಕೊಂಡು ಈ ರೀತಿ ಮಾತನಾಡೋದು ತಪ್ಪು. ಸಿನಿಮಾಗೆ ಜನ ಬರ್ತಿಲ್ಲ ಸಿನಿಮಾ ಇಂಡಸ್ಟ್ರಿ ಮುಳುಗು ಹೋಯಿತು ಅಂತ ನಾವು ಮಾತನಾಡಬಾರದು ಅಂತ ಧನಂಜಯ್ ಹೇಳಿದ್ರು.
ನಾವು ಸಿನಿಮಾ ಮಾಡೋದನ್ನ ನಿಲ್ಲಿಸಬಾರದು ನಮ್ಮ ಪ್ರಯತ್ನ ಅವಿರಿತವಾಗಿ ಸಾಗುತ್ತಾನೆ ಇರಬೇಕು ಆವಾಗ್ಲೇ ನಮ್ಮ ಇಂಡಸ್ಟ್ರಿ ಬೆಳೆಯುವುದು
ನಾವು ಒಳ್ಳೆಯ ಕಂಟೆಂಟ್ಗಳ್ನ ಕೊಟ್ರೆ ಜನ ಬಂದೇ ಬರ್ತಾರೆ ಕೆಲವೊಮ್ಮೆ ಜನರಿಗೆ ಸಿನಿಮಾ ತಲುಪೋದಕ್ಕೆ ಸಾಧ್ಯವಾಗದೇ ಇರಬಹುದು ಅಥವಾ ಕೆಲವೊಂದು ಸಿನಿಮಾಗಳು ಚೆನ್ನಾಗಿ ಮೂಡಿ ಬರದೇ ಇರಬಹುದು.
ಹೀಗಾಗಿ ನಾವು ನಮ್ಮ ಪ್ರಯತ್ನವನ್ನು ಮಾಡ್ತಾ ಇರಬೇಕು ಖಂಡಿತ ಜನರು ಥಿಯೇಟರ್ ಗೆ ಬಂದೇ ಬರ್ತಾರೆ ನಮ್ಮನ್ನ ನಂಬಿಕೊಂಡು ಸಾವಿರಾರು ಕುಟುಂಬಗಳಿವೆ.
ಅದರಿಂದ ಈ ರೀತಿ ಮಾತನಾಡೋದು ತುಂಬಾ ತಪ್ಪು ನಾವು ಇದನ್ನ ನೆಗೆಟಿವ್ ಆಗಿ ಸ್ಪ್ರೆಡ್ ಮಾಡಬಾರದು. ಸಿನಿಮಾ ಇಂಡಸ್ಟ್ರಿ ಇನ್ನು ಸತ್ತಿಲ್ಲ ನಾವು ಸಿನಿಮಾ ಮಾಡಿದನ್ನು ನಿಲ್ಲಿಸಿ ಬಿಟ್ರೆ ಅವಾಗ ಸಿನಿಮಾ ಸತ್ತೋಗುತ್ತೆ.https://youtu.be/dT1cPl9cVHw?si=DOekDPWpbZnLiTGV
ಕೃಷ್ಣ ಪ್ರಣಯಸಖಿ ಹಾಗೂ ಭೀಮ ಸಿನಿಮಾ ಗಳಿಗೆ ಜನರು ಬಂದಿಲ್ವಾ
ಜನರು ಸಿನಿಮಾಗೆ ಬರ್ತಿಲ್ಲ ಅನ್ನೋದು ಸುಳ್ಳು ಈಗ ಬಂದಿಲ್ವಾ. ಕೃಷ್ಣನ್ ಪ್ರಣಯ ಸುಖಿ ಹಾಗೂ ಭೀಮ ಸಿನಿಮಾಗಳಿಗೆ ಜನರು ಬಂದಿದ್ದಾರೆ ನಾವು ಒಳ್ಳೆಯ ಕಂಟೆಂಟ್ ಕೊಟ್ರೆ ಜನ ಖಂಡಿತವಾಗಿ ಥಿಯೇಟರ್ ಗೆ ಬರ್ತಾರೆ.
ನಾವು ಪ್ರೇಕ್ಷಕರನ್ನ ದೂರದಲ್ಲಿ ಅರ್ಥವಿಲ್ಲ ಜನ ಯಾವತ್ತೂ ಒಳ್ಳೆಯ ಸಿನಿಮಾಗಳನ್ನ ಕೈ ಹಿಡಿದಿದ್ದಾರೆ ಗೆಲ್ಲಿಸಿದ್ದಾರೆ ಬಂದಿದ್ದಾರೆ ಹಾಗಾಗಿ ನಾವು ಕಂಟಿನಿಯಸ್ ಎಫರ್ಟ್ನ ಹಾಕ್ಬೇಕು ಅಂತ ಹೇಳಿದರು.
ಡೇರ್ ಡೆವಿಲ್ ಸಿನಿಮಾ ಮಾಡಿದ್ದಕ್ಕೆ ಶಶಾಂಕ್ ಅಂತ ನಿರ್ದೇಶಕರು ನನಗೆ ಸಿಕ್ಕಿದ್ದು ಅದರಿಂದಾನೆ ಜಿಂಗೂ ಸಿನಿಮಾ ಮಾಡೋದಕ್ಕೆ ಆಗಿದ್ದು. ಅಂತ ಸಿನಿಮಾ ಬಗ್ಗೆ ಮನೆ ಬಿಚ್ಚಿ ಮಾತನಾಡಿದರು.
ಇದನ್ನು ಓದಿ: ಕೊನೆಗೂ ಈಡೇರಲಿಲ್ಲ ರಾಜಕುಮಾರ್ ಕೊನೆಯ ಆಸೆ https://swarasyanews.com/?p=149
ಇನ್ನು ಡಾಲಿ ಧನಂಜಯ್ ಅವರು ವಿದ್ಯಾಪತಿ, ಜೆ ಸಿ ದ ಯೂನಿವರ್ಸಿಟಿ, ಹಾಗೂ ಇನ್ನೊಂದು ಹೆಸರಿಡದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಇನ್ನು ಕೆಂಪೇಗೌಡ ಚಿತ್ರದ ಬಗ್ಗೆ ಮಾತನಾಡಿದ ಡಾಲಿ ದೇಹವನ್ನ ಹುರಿಗೊಳಿಸುವ ಪ್ರಯತ್ನದಲ್ಲಿದ್ದೇನೆ.
ಕಲಾವಿದರಿಗೆ ಡಿಸಿಪ್ಲಿನ್ ತುಂಬಾನೇ ಇಂಪಾರ್ಟೆಂಟ್ ಹಾಗಾಗಿ ಅದು ಪ್ರೇಕ್ಷಕರ ಎದುರು ಅಸಹ್ಯವಾಗಿ ಕಾಣಬಾರದು ಅಂತ ವರ್ಕೌಟ್ ಶುರು ಮಾಡಿದ್ದೇನೆ ಅಂತ ಹೇಳಿದರು.
ನನ್ನ ಮದುವೆ ನಮ್ಮ ಅಜ್ಜಿಯ ಕನಸು
ಇನ್ನು ಸಿನಿಮಾ ಮೇಲೆ ಸಿನಿಮಾ ಅವಾರ್ಡ್ ಗಳ ಮೇಲೆ ಅವಾರ್ಡ್ ಗಳನ್ನು ತೆಗೆದುಕೊಳ್ಳುತ್ತಿದ್ದೀರಾ ಆದರೆ ನೀವು ಇನ್ನು ಸಿಂಗಲ್ ಆಗಿದ್ದೀರಾ ಅಂತ ಒಬ್ರು ಕೇಳಿದ ಪ್ರಶ್ನೆಗೆ
ಇಲ್ಲ ಖಂಡಿತ ಬೇಗ ಆಗ್ತೀನಿ ನಮ್ಮ ಅಜ್ಜಿ ಕನಸು ಹಾಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ನನ್ನ ಮದುವೆ ಬಗ್ಗೆ ತಿಳಿಸ್ತೀನಿ ಅಂತ ಡಾಲಿ ಧನಂಜಯ್ ತಿಳಿಸಿದರು.
ನಟಿ ಅಮೃತ ಅಯ್ಯಂಗಾರ್ ಹಾಗೂ ನಟ ಡಾಲಿ ಧನಂಜಯ್ ಇಬ್ಬರೂ ಕೂಡ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಇತ್ತೀಚಿಗಷ್ಟೇ ವೈರಲ್ ಆಗಿದ್ದು,
ಇದು ಏನಾದರೂ ನಿಜಾನೆ ಆಗಿದ್ದರೆ ನಾವು ಖಂಡಿತವಾಗಿಯೂ ನಿಮ್ಮಗಳ ಬಳಿ ಹೇಳ್ತೀವಿ ಹಾಗಾಗಿ ಅಲ್ಲಿವರೆಗೂ ನೀವು ದಯವಿಟ್ಟು ಕಾಯಬೇಕು ಅಂತ ಹೇಳಿದರು.