ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 200 ಕ್ಕೂ ಹೆಚ್ಚು
ಕೇರಳದ ಸಂತ್ರಸ್ತರಿಗೆ ಅಲ್ಲು ಅರ್ಜುನ್ ಆರ್ಥಿಕ ನೆರವು
ಕೇರಳದ ವೈನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ, ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಸಾವಿರಾರು ಜನ ವಸತಿಗಳಿಲ್ಲದೆ ನಿರ್ಗತಿಕರಾಗಿದ್ದಾರೆ. ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 200 ದಾಟಿದೆ ಎಂದು ಸರ್ಕಾರ ತಿಳಿಸಿದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅಲ್ಲು ಅರ್ಜುನ್ ಆರ್ಥಿಕ ನೆರವು
ಇನ್ನು ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ಹಲವಾರು ಜನ ದೇಣಿಗೆಯನ್ನ ನೀಡ್ತಾ ಇದ್ದು, ಇದೀಗ ಅಲ್ಲು ಅರ್ಜುನ್ ಕೂಡ ತಮ್ಮ ಕೈಲಾದಷ್ಟು ಹಣ ಸಹಾಯವನ್ನು ಮಾಡಿದ್ದಾರೆ.
ಹೌದು ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ಅವರು 25 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ದೇಣಿಗೆಯನ್ನು ನೀಡಿದ್ದಾರೆ.
ಇದನ್ನೂ ಓದಿ : https://youtu.be/-gv-SFz0E_k?si=CGuWI4WvWa_v4EFZ
ಕೇರಳದ ಸಂತ್ರಸ್ತರಿಗಾಗಿ ಮನಮಿಡಿದ ಪುಷ್ಪ
ಈ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅಲ್ಲು ಅರ್ಜುನ್, ವೈನಾಡಿನಲ್ಲಿ ಸಂಭವಿಸಿದ ದುರಂತ ನನಗೆ ದುಃಖವನ್ನು ಉಂಟು ಮಾಡಿದೆ. ಕೇರಳದ ಜನ ನನಗೆ ತುಂಬಾ ಪ್ರೀತಿಯನ್ನು ತೋರಿಸುತ್ತಾರೆ.
ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ನಾನು 25 ಲಕ್ಷಗಳನ್ನ ನೀಡಿ, ನನ್ನ ಕೈಲಾದಷ್ಟು ಸಹಾಯವನ್ನು ಮಾಡಲು ಬಯಸುತ್ತೇನೆ. ನಿಮ್ಮ ಸುರಕ್ಷತೆ ಮತ್ತು ಶಕ್ತಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನಾಲ್ಕು ರಾಷ್ಟ್ರಪ್ರಶಸ್ತಿ ಪಡೆದ ಕಾಂತಾರ ಕೆಜಿಎಫ್ https://swarasyanews.com/?p=87
ಇನ್ನು ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ, ರಿಲೀಸ್ ಗೆ ರೆಡಿಯಾಗಿದೆ. ಪುಷ್ಪ ಪಾರ್ಟ್ 1 ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಕ್ಕತ್ ಸದ್ದು ಮಾಡಿತ್ತು. ಈಗ ಪುಷ್ಪ ಪಾರ್ಟ್ ಟು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.
ಬಾಕ್ಸಾಫೀಸ್ ನಲ್ಲಿ ಯಾವ ರೀತಿ ಕಲೆಕ್ಷನ್ ಮಾಡೋದಿದೆ ಎಂದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪುಷ್ಪ 2 ಚಿತ್ರದ ಹಾಡೊಂದು ಸಖತ್ ವೈರಲ್ ಆಗಿದೆ.
ದೇವಿ ಶ್ರೀ ಪ್ರಸಾದ್ ಸಂಗೀತವಿರುವ ಈ ಚಿತ್ರಕ್ಕೆ, ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.
ಪುನರ್ ವಸತಿಗಾಗಿ ಮೂರು ಕೋಟಿ ರೂಪಾಯಿಗಳ ನೆರವು
ಇನ್ನು ಖ್ಯಾತ ನಟ ಮೋಹನ್ ಲಾಲ್ ಅವರು ಕೂಡ ವೈನಾಡಿನ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿ, 3 ಕೋಟಿ ರೂಪಾಯಿಗಳನ್ನು ನೆರವಿಗಾಗಿ ಘೋಷಣೆ ಮಾಡಿದ್ದರು.