” ರಕ್ಷಿತ್ ನನಗೆ ಸ್ನೇಹಿತನಲ್ಲ” ರಿಷಬ್ ಶಾಕಿಂಗ್ ಹೇಳಿಕೆ. ನಟ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ, ಇಬ್ಬರು ಒಟ್ಟಿಗೆ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಸಾಕಷ್ಟು ಏಳು ಬೀಳುಗಳ ನಂತರ, ಸಿನಿಮಾ ರಂಗದಲ್ಲಿ, ತಮ್ಮದೇ ಆದ ಚಾಪನ್ನ ಮೂಡಿಸಿದವರು. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ, ಯಶಸ್ಸಿನ ಸಿನಿಮಾಗಳನ್ನ ನೀಡಿದವರು.
ಇದನ್ನೂ ನೋಡಿ : https://swarasyanews.com/?p=15
ಸದಾ ಒಟ್ಟಿಗೆ ಇರುವ ಇಬ್ಬರು ನಟರು, ಉತ್ತಮ ಸ್ನೇಹಿತರಾಗಿದ್ದರು. ಇದೀಗ ರಿಷಬ್ ಶೆಟ್ಟಿ ನೀಡಿದ ಹೇಳಿಕೆಯಿಂದ, ರಕ್ಷಿತ್ ಶೆಟ್ಟಿ ಶಾಕ್ ಆಗಿದ್ದಾರೆ.
ತುಘುಲಕ್ ಸಿನಿಮಾದಿಂದ ಜೊತೆಯಾದ ಇಬ್ಬರು ನಟರು, ನಂತರ ರಿಕ್ಕಿ, ಕಿರಿಕ್ ಪಾರ್ಟಿ, ಉಳಿದವರು ಕಂಡಂತೆ ಸಿನಿಮಾಗಳಲ್ಲಿ, ಒಟ್ಟಿಗೆ ಕೆಲಸ ಮಾಡಿದ್ದರು.
ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ ಅಭಿನಯದ, ಕಿರಿಕ್ ಪಾರ್ಟಿ ಸಿನಿಮಾ, 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಇನ್ನೂ ರಿಷಬ್ ಶೆಟ್ಟಿ ನಿರ್ದೇಶನದ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಸಿನಿಮಾ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ನಟನಾಗಿ ರಿಷಬ್ ಶೆಟ್ಟಿ
ನಿರ್ದೇಶನದ ನಂತರ ರಿಷಬ್ ಶೆಟ್ಟಿ, ಬೆಲ್ ಬಾಟಮ್ ಸಿನಿಮಾದ ಮೂಲಕ, ನಟನಾಗಿ ಪಾದರ್ಪಣೆ ಮಾಡಿದರು,
ಆದರೆ ಕಾಂತಾರಾ ಸಿನಿಮಾದ ನಿರ್ದೇಶನ ಮತ್ತು ನಟನೆಯಿಂದ, ರಿಷಬ್ ಫ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು.
ಕಾಂತರಾ ಸಿನಿಮಾ 400 ಕೋಟಿಗೂ, ಅಧಿಕ ಕಲೆಕ್ಷನ್ ಮಾಡಿತು. ಕಾಂತರಾ ಸಿನಿಮಾದ ನಂತರ ರಿಷಬ್ ಶೆಟ್ಟಿಗೆ ದೇಶದಾದ್ಯಂತ, ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ಇದೆಲ್ಲದರ ನಡುವೆ ರಿಷಬ್ ಶೆಟ್ಟಿ, ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಇದೀಗ ತಮ್ಮ ನಿರ್ಮಾಣದ, ಲಾಫಿಂಗ್ ಬುದ್ಧ ಸಿನಿಮಾದ, ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ,
ಇದನ್ನೂ ನೋಡಿ : https://youtu.be/-gv-SFz0E_k?si=CGuWI4WvWa_v4EFZ
ಈ ನಡುವೆ ಖಾಸಗಿ ಯುಟ್ಯೂಬ್ ಚಾನೆಲ್ ಒಂದಕ್ಕೆ, ಸಂದರ್ಶನ ನೀಡುವ ವೇಳೆ, ರಕ್ಷಿತ್ ಶೆಟ್ಟಿ ನನ್ನ ಸ್ನೇಹಿತನಲ್ಲ. ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಹೌದು ರಕ್ಷಿತ್ ಶೆಟ್ಟಿ ನನ್ನ ಸ್ನೇಹಿತನಲ್ಲ. ರಕ್ಷಿತ್ ನನ್ನ ಪರ್ಸನಲ್ ಲೈಫ್, ಹಾಗೂ ಪ್ರೊಫೆಷನಲ್ ಲೈಫ್ ಎರಡರಲ್ಲೂ ದೊಡ್ಡ ವ್ಯಕ್ತಿ. ರಕ್ಷಿತ್ ಶಿವನ ದೊಡ್ಡ ಭಕ್ತ. ಅವನಲ್ಲಿ ಶಿವನ ಅಂಶವಿದೆ. ಅವನು ಸ್ನೇಹಿತನಿಗಿಂತ ಹೆಚ್ಚು. ಅವನು ಸಹೋದರನಿಗಿಂತ ಹೆಚ್ಚು. ನನಗೆ ಅವನು ಎಲ್ಲವೂ. ಎಂದು ರಿಷಬ್ ಶೆಟ್ಟಿ ರಕ್ಷಿತ್ ಬಗ್ಗೆ ಹಾಡಿ ಹೊಗಳಿದ್ದಾರೆ.
ನಾನು ಮತ್ತು ರಕ್ಷಿತ್ ಇಬ್ಬರೂ, ಒಳ್ಳೆಯ ಸ್ನೇಹಿತರಾಗಿದ್ದು, ನಮ್ಮ ಮೇಲೆ ಯಾರ ಕೆಟ್ಟ ಕಣ್ಣು ಬಿದ್ದರೂ ಕೂಡ, ನಮಗೆ ಏನೂ ಆಗುವುದಿಲ್ಲ
ನಾನು ಮತ್ತು ರಕ್ಷಿತ್ ಇಬ್ಬರೂ, ಒಳ್ಳೆಯ ಸ್ನೇಹಿತರಾಗಿದ್ದು, ನಮ್ಮ ಮೇಲೆ ಯಾರ ಕೆಟ್ಟ ಕಣ್ಣು ಬಿದ್ದರೂ ಕೂಡ, ನಮಗೆ ಏನೂ ಆಗುವುದಿಲ್ಲ. ಅಂತ ರಿಷಬ್ ಶೆಟ್ಟಿ ಹೇಳಿದ್ದಾರೆ
ಇನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತರಾ ಭಾಗ ಒಂದು, ಚಿತ್ರೀಕರಣದ ಹಂತದಲ್ಲಿದೆ.
ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ, ಸಿದ್ಧವಾಗುತ್ತಿರುವ ಕಾಂತರಾ ಚಿತ್ರಕ್ಕೆ, ಅಜನೀಶ್ ಲೋಕನಾಥ್ ಸಂಗೀತವಿದ್ದು, ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ, ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಹಾಗೂ, ರಿಶಬ್ ಶೆಟ್ಟಿ ಇಬ್ಬರೂ ಕೂಡ, ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ.
ಇಬ್ಬರೂ ನಟರ ಮುಂದಿನ ಸಿನಿಮಾಗಳು, ಯಶಸ್ವಿಯಾಗಲಿ ಅಂತ ಅಭಿಮಾನಿಗಳು ಆಶಿಸುತ್ತಾರೆ. ಇಂತಹ ಅದ್ಭುತ ಕನ್ನಡ ಪ್ರತಿಭೆಗಳು, ಕನ್ನಡದ ಹಿರಿಮೆಯನ್ನು, ಮತ್ತಷ್ಟು ಹೆಚ್ಚಿಸಲಿ ಎಂಬುದು ನಮ್ಮ ಮಹಾದಾಸೆ.
ಕನ್ನಡದ ಪ್ರತಿಯೊಬ್ಬ ನಟನ ಕೂಡ ಹೀಗೆ ಒಗ್ಗಟ್ಟಿನಿಂದ ಇರಬೇಕೆಂದು ಪ್ರತಿಯೊಬ್ಬ ಅಭಿಮಾನಿಯೂ ಬಯಸುತ್ತಾನೆ. ನಮ್ಮ ನಟರೆಲ್ಲರೂ ಯಾವಾಗ ಒಗ್ಗಟ್ಟಿನಿಂದ ಇರುತ್ತಾರೆ. ಆವಾಗ ಪಕ್ಕದ ರಾಜ್ಯದ ಸಿನಿಮಾ ಮಂದಿಗೆ ಸೆಡ್ಡು ಹೊಡೆಯುವುದು ಖಂಡಿತ.
ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.